ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಪಿ. ಇ. ಎಸ್ ಪದವಿ ಪೂರ್ವ ಕಾಲೇಜು, ಬೆಂಗಳೂರು ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯ ಉದ್ಭಾಟನಾ ಸಮಾರಂಭ, ದಿನಾಂಕ 28-9-2022 ರಂದು ಬುಧವಾರ ಬೆಳಿಗ್ಗೆ 9.30 ಗಂಟೆಗೆ, ಡಾ. ಎಮ್ ಆರ್ ದೊರೆಸ್ವಾಮಿ, ಶಿಕ್ಷಣ ಸುಧಾರಣೆಗಳ ಸಲಹೆಗಾರರು, ಕರ್ನಾಟಕ ಸರ್ಕಾರ, ಕುಲಾಧಿಪತಿಗಳು ಪಿ.ಇ ಎಸ್ ವಿಶ್ವವಿದ್ಯಾಲಯ, ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯ ಉದ್ಘಾಟನೆಯನ್ನು ಶ್ರೀ ಎಲ್ ಎ ರವಿಸುಬ್ರಹ್ಮಣ್ಯ, ವಿಧಾನಸಭಾ ಸದಸ್ಯರು, ಬಸವನಗುಡಿ ವಿಧಾನಸಭಾ ಕ್ಷೇತ್ರ ಇವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಆನಂದ್ ರಾಜ್, ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ, ಇವರು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಸುಮಾರು 90 ಬಾಲಕರ ತಂಡಗಳು ಹಾಗೂ 60 ಬಾಲಕಿಯರ ತಂಡಗಳು ಭಾಗವಹಿಸುತ್ತಿದ್ದಾರೆ
ಸ್ಥಳ: ಶಂಕರ್ ನಾಗ್ ಆಟದ ಮೈದಾನ, ವಿದ್ಯಾಪೀಠ ಸರ್ಕಲ್, ಬೆಂಗಳೂರು - 50